Dataset Viewer (First 5GB)
Auto-converted to Parquet Duplicate
src_lang
stringclasses
1 value
tgt_lang
stringclasses
1 value
src
stringlengths
1
5.82k
tgt
stringlengths
1
5.66k
eng_Latn
kan_Knda
Sikhs used their newly established power to remove Mughal officials and replace them with Sikhs.
ಸಿಖ್ಖರು ಹೊಸದಾಗಿ ನೆಲೆಗೊಂಡ ತಮ್ಮ ಅಧಿಕಾರವನ್ನು ಬಳಸಿಕೊಂಡು ಮೊಘಲ್ ಅಧಿಕಾರಿಗಳನ್ನು ತೆಗೆದುಹಾಕಿ ಅವರ ಸ್ಥಾನದಲ್ಲಿ ಸಿಖ್ಖರನ್ನು ನೇಮಿಸಿದರು.
eng_Latn
kan_Knda
On 12 January 1709, Bahadur Shah reached Hyderabad and prepared his troops.
೧೭೦೯ರ ಜನವರಿ ೧೨ರಂದು, ಬಹಾದುರ್ ಶಾಹನು ಹೈದರಾಬಾದನ್ನು ತಲುಪಿ, ತನ್ನ ಪಡೆಗಳನ್ನು ತಯಾರುಗೊಳಿಸಿದನು.
eng_Latn
kan_Knda
Although the king of Golconda refused to surrender, Subahdar of Hyderabad Rustam Dil Khan did so.
ಗೋಲ್ಕೊಂಡದ ರಾಜನು ಶರಣಾಗಲು ನಿರಾಕರಿಸಿದರೂ, ಹೈದರಾಬಾದಿನ ಸುಬೇದಾರ್ ರುಸ್ತಂ ದಿಲ್ ಖಾನ್ ಶರಣಾದನು.
eng_Latn
kan_Knda
He appealed to Muslims in name of religion and declared a jihad against the Sikhs.
ಅವನು ಧರ್ಮದ ಹೆಸರಿನಲ್ಲಿ ಮುಸ್ಲಿಮರಲ್ಲಿ ಮನವಿ ಮಾಡಿಕೊಂಡನು ಮತ್ತು ಸಿಖ್ಖರ ವಿರುದ್ಧ ಜಿಹಾದ್ ಘೋಷಿಸಿದನು.
eng_Latn
kan_Knda
In Jodhpur, Bahadur Shah got the news that the Maharana Amar Singh II had fled from Udaipur to hide in the hills.
ಜೋಧಪುರದಲ್ಲಿ, ಬಹಾದುರ್‌ ಶಾಹನಿಗೆ, ಎರಡನೇ ಮಹಾರಾಣಾ ಅಮರ್ ಸಿಂಗ್ ಉದಯಪುರದಿಂದ ಪಲಾಯನಗೈದು ಬೆಟ್ಟಗಳಲ್ಲಿ ಅಡಗಿಕೊಂಡಿದ್ದಾನೆ ಎಂಬ ಸುದ್ದಿ ದೊರೆಯುತ್ತದೆ.
eng_Latn
kan_Knda
They then marched to Jalalabad and Banda asked Jalal Khan to surrender and release the Sikh prisoners, but the Faujdar refused.
ತದನಂತರ ಅವರು ಜಲಾಲಾಬಾದ್‌ಗೆ ಮುನ್ನಡೆದರು ಮತ್ತು‌ ಶರಣಾಗುವಂತೆಯೂ, ಸಿಖ್ ಕೈದಿಗಳನ್ನು ಬಿಡುಗಡೆ ಮಾಡುವಂತೆಯೂ ಜಲಾಲ್ ಖಾನನಿಗೆ ಬಂದಾ ಹೇಳಿದನಾದರೂ, ಆ ಫೌಜುದಾರನು ನಿರಾಕರಿಸಿದನು.
eng_Latn
kan_Knda
Despite having arguments with Gandhi, Patel respected his instincts and leadership.
ಪಟೇಲರು ಗಾಂಧಿಯವರೊಂದಿಗೆ ವಾಗ್ವಾದ ನಡೆಸಿದರೂ, ಅವರ ಸಹಜಪ್ರವೃತ್ತಿ ಮತ್ತು ನಾಯಕತ್ವವನ್ನು ಗೌರವಿಸುತ್ತಿದ್ದರು.
eng_Latn
kan_Knda
It advocated the establishment of a secular nation with a minimum wage and the abolition of untouchability and serfdom.
ಇದು ಕನಿಷ್ಠ ವೇತನದೊಂದಿಗೆ ಜಾತ್ಯತೀತ ರಾಷ್ಟ್ರದ ಸ್ಥಾಪನೆ ಹಾಗೂ ಅಸ್ಪೃಶ್ಯತೆ ಮತ್ತು ಜೀತಪದ್ಧತಿಗಳ ನಿರ್ಮೂಲನವನ್ನು ಪ್ರತಿಪಾದಿಸಿತು.
eng_Latn
kan_Knda
She owned ships that carried pilgrims to and from the Islamic holy city Mecca and ran an extensive trade of silk and several spices to international borders.
ಅವಳು ಇಸ್ಲಾಮಿನ ಪವಿತ್ರ ನಗರವಾದ ಮೆಕ್ಕಾಕ್ಕೆ ಹೋಗಿ ಬರುವ ಯಾತ್ರಿಕರನ್ನು ಕರೆದೊಯ್ಯುವ ಹಡಗುಗಳನ್ನು ಹೊಂದಿದ್ದಳು ಮತ್ತು ಅಂತಾರಾಷ್ಟ್ರೀಯ ಗಡಿಗಳಿಗೆ ರೇಷ್ಮೆ ಮತ್ತು ಹಲವಾರು ಮಸಾಲೆ ಪದಾರ್ಥಗಳ ವ್ಯಾಪಕವಾದ ವ್ಯಾಪಾರವನ್ನು ನಡೆಸುತ್ತಿದ್ದಳು.
eng_Latn
kan_Knda
At sunrise the following day, the Mughal army charged towards Kam Bakhsh.
ಮರುದಿನ ಸೂರ್ಯೋದಯದ ವೇಳೆಗೆ, ಮೊಘಲ್ ಸೈನ್ಯವು ಕಮ್ ಬಖ್ಶ್‌ನೆಡೆಗೆ ಧಾವಿಸಿತು.
eng_Latn
kan_Knda
After the victory at Sirhind, the Sikhs turned towards the Gangetic Doab.
ಸರ್ಹಿಂದ್ ವಿಜಯದ ನಂತರ, ಸಿಖ್ಖರು ಗಂಗಾತೀರದ ದೋಅಬ್ ಕಡೆಗೆ ತಿರುಗಿದರು.
eng_Latn
kan_Knda
Singh was appointed prime minister, by President Reddy, after Gandhi and Sanjay Gandhi promised Singh that Congress would support his government from outside on certain conditions.
ಗಾಂಧಿ ಮತ್ತು ಸಂಜಯ್ ಗಾಂಧಿ ಕೆಲವು ಷರತ್ತುಗಳ ಮೇಲೆ ಕಾಂಗ್ರೆಸ್ ಆತನ ಸರ್ಕಾರಕ್ಕೆ ಬಹಿರಂಗ ಬೆಂಬಲ ನೀಡುತ್ತದೆಯೆಂದು ಸಿಂಗರಿಗೆ ಭರವಸೆ ನೀಡಿದ ನಂತರ, ರಾಷ್ಟ್ರಪತಿ ರೆಡ್ಡಿಯವರು ಸಿಂಗ್‌ರನ್ನು ಪ್ರಧಾನಿಯಾಗಿ ನೇಮಿಸಿದರು.
eng_Latn
kan_Knda
Since Gandhi had lost her seat in the election, the defeated Congress party appointed Yashwantrao Chavan as their parliamentary party leader.
ಚುನಾವಣೆಯಲ್ಲಿ ಗಾಂಧಿ ತನ್ನ ಸ್ಥಾನವನ್ನು ಕಳೆದುಕೊಂಡಿದ್ದರಿಂದ, ಸೋತ ಕಾಂಗ್ರೆಸ್ ಪಕ್ಷವು ಯಶವಂತರಾವ್ ಚೌಹಾಣರನ್ನು ತಮ್ಮ ಸಂಸದೀಯ ಪಕ್ಷದ ನಾಯಕನನ್ನಾಗಿ ನೇಮಿಸಿತು.
eng_Latn
kan_Knda
After the signing of the Gandhi-Irwin Pact, Patel was elected president of Congress for its 1931 session in Karachi where the Congress ratified the pact and committed itself to the defence of fundamental rights and civil liberties.
ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಪಟೇಲರು ಕರಾಚಿಯಲ್ಲಿ ನಡೆದ ೧೯೩೧ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು, ಅಲ್ಲಿ ಕಾಂಗ್ರೆಸ್ ಆ ಒಪ್ಪಂದವನ್ನು ಅನುಮೋದಿಸಿತು ಮತ್ತು ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಗೆ ಬದ್ಧವಾಯಿತು.
eng_Latn
kan_Knda
As Gandhi embarked on the Dandi Salt March, Patel was arrested in the village of Ras and was put on trial without witnesses, with no lawyer or journalists allowed to attend.
ಗಾಂಧಿ ದಂಡಿ ಉಪ್ಪಿನ ಯಾತ್ರೆಯನ್ನು ಪ್ರಾರಂಭಿಸಿದಾಗ, ಪಟೇಲರನ್ನು ರಾಸ್ ಗ್ರಾಮದಲ್ಲಿ ಬಂಧಿಸಲಾಯಿತು ಮತ್ತು ಯಾವುದೇ ವಕೀಲರು ಅಥವಾ ಪತ್ರಕರ್ತರು ಹಾಜರಾಗಲು ಅವಕಾಶ ನೀಡದೇ, ಪ್ರೇಕ್ಷಕರಹಿತ ವಿಚಾರಣೆಗೆ ಒಳಪಡಿಸಲಾಯಿತು.
eng_Latn
kan_Knda
Shah gave him the title of Mirza Rajah, and he received gifts valued at 100, 000 rupees.
ಶಾಹ್ ಆತನಿಗೆ ಮಿರ್ಜ಼ಾ ರಾಜ ಎಂಬ ಬಿರುದನ್ನು ನೀಡಿದನು ಮತ್ತು ಆತ ೧೦೦,೦೦೦ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಪಡೆದನು.
eng_Latn
kan_Knda
He also asked Hari Shivdev to distribute fifty khandis of grain which were being sent to him from Sagargad among the cultivators.
ಆತ ಸಾಗರ್‌ಗಢದಿಂದ ತನಗೆ ಕಳುಹಿಸಲಾಗುತ್ತಿದ್ದ ಐವತ್ತು ಖಂಡಿಗಳಷ್ಟು ಧಾನ್ಯವನ್ನು ರೈತರಿಗೆ ವಿತರಿಸುವಂತೆಯೂ ಹರಿ ಶಿವದೇವನಿಗೆ ಹೇಳಿದರು.
eng_Latn
kan_Knda
A member of the British East India Company enjoying a Durbar.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಒರ್ವ ಸದಸ್ಯ ದರ್ಬಾರನ್ನು ಆನಂದಿಸುತ್ತಿರುವುದು.
eng_Latn
kan_Knda
Soon afterwards, the Congress party split again with Gandhi floating her own Congress faction.
ಸ್ವಲ್ಪ ಸಮಯದ ನಂತರ, ಕಾಂಗ್ರೆಸ್ ಪಕ್ಷವು ಮತ್ತೆ ವಿಭಜನೆಯಾಗಿ, ಗಾಂಧಿ ತಮ್ಮದೇ ಪ್ರತ್ಯೇಕವಾದ ಕಾಂಗ್ರೆಸ್ ಬಣವನ್ನು ಕಟ್ಟಿಕೊಂಡರು.
eng_Latn
kan_Knda
The arrest meant that Gandhi was automatically expelled from Parliament.
ಈ ಬಂಧನದಿಂದಾಗಿ ಗಾಂಧಿ ಸಂಸತ್ತಿನಿಂದ ಅಪ್ರಯತ್ನವಾಗಿ ಉಚ್ಚಾಟಿತರಾದರು.
eng_Latn
kan_Knda
He joined the Indian National Congress, rose to become the leader of a progressive faction during the 1920s, and eventually of the Congress, receiving the support of Mahatma Gandhi who was to designate Nehru as his political heir.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸೇರಿದ ಆತ, ೧೯೨೦ರ ದಶಕದಲ್ಲಿ ಪ್ರಗತಿಪರ ಬಣದ ನಾಯಕನ ಸ್ಥಾನಕ್ಕೇರಿ, ಮುಂದೆ ಆತನನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ನೇಮಿಸಲಿದ್ದ ಮಹಾತ್ಮ ಗಾಂಧಿಯವರ ಬೆಂಬಲವನ್ನು ಪಡೆದು ಅಂತಿಮವಾಗಿ ಕಾಂಗ್ರೆಸ್ಸಿನ ನಾಯಕರಾದರು.
eng_Latn
kan_Knda
Salil Chowdhury, the music director for Naukari, was initially dismissive of Kumar as a singer when he found that Kumar had no formal training in music.
ಕುಮಾರ್‌ ಸಂಗೀತದಲ್ಲಿ ಯಾವುದೇ ಸಾಂಪ್ರದಾಯಿಕ ತರಬೇತಿಯನ್ನು ಪಡೆದಿಲ್ಲವೆಂಬುದು ತಿಳಿದಾಗ ನೌಕರಿ ಚಿತ್ರದ ಸಂಗೀತ ನಿರ್ದೇಶಕ ಸಲೀಲ್ ಚೌಧರಿ, ಆರಂಭದಲ್ಲಿ ಗಾಯಕನಾಗಿ ಕುಮಾರ್‌ರನ್ನು ತಿರಸ್ಕರಿಸಿದ್ದರು.
eng_Latn
kan_Knda
When Akbar was informed of the news that his chief Hindu wife was expecting a child again, an order was passed for the establishment of a royal palace in the Sikri near the lodgings of Shaikh Salim, where the Empress could enjoy the repose being in the vicinity of the revered saint.
ಆತನ ಪ್ರಧಾನ ಹಿಂದೂ ಪತ್ನಿಯು ಪುನಃ ಗರ್ಭಿಣಿಯಾಗಿರುವಳೆಂಬ ಸುದ್ದಿಯು ಅಕ್ಬರನಿಗೆ ತಿಳಿದಾಗ, ಸಿಕ್ರಿಯಲ್ಲಿ ಶೇಖ್ ಸಲೀಮರ ನಿವಾಸದ ಸಮೀಪ ರಾಜೋಚಿತ ಅರಮನೆಯೊಂದನ್ನು ನಿರ್ಮಿಸಲು ಆದೇಶ ಹೊರಡಿಸಲಾಯಿತು, ಅಲ್ಲಿ ಸಾಮ್ರಾಜ್ಞಿಯು ಪೂಜ್ಯ ಸಂತರ ಸಾನ್ನಿಧ್ಯದಲ್ಲಿದ್ದುಕೊಂಡು ವಿಶ್ರಾಂತಿಯನ್ನು ಆನಂದಿಸಬಹುದಿತ್ತು.
eng_Latn
kan_Knda
The attempt was made when Akbar was returning from a visit to the dargah of Hazrat Nizamuddin near Delhi, by an assassin shooting an arrow.
ಅಕ್ಬರನು ದೆಹಲಿ ಸಮೀಪದ ಹಜ಼ರತ್ ನಿಜಾ಼ಮುದ್ದೀನ್ ದರ್ಗಾಕ್ಕೆ ಭೇಟಿ ನೀಡಿ ಮರಳುತ್ತಿದ್ದಾಗ ಬಾಣವೊಂದನ್ನು ಪ್ರಯೋಗಿಸಿದ ಹಂತಕನೊಬ್ಬ ಈ ಯತ್ನವನ್ನು ಮಾಡಿದನು.
eng_Latn
kan_Knda
Her Cabinet and government then recommended that President Fakhruddin Ali Ahmed declare a state of emergency because of the disorder and lawlessness following the Allahabad High Court decision.
ಅಲಹಾಬಾದ್ ಹೈಕೋರ್ಟ್ ತೀರ್ಪಿನ ಪರಿಣಾಮವಾಗಿ ಉಂಟಾದ ಉದ್ವಿಗ್ನತೆ ಮತ್ತು ಅರಾಜಕತೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೆಂದು ಆಕೆಯ ಸಚಿವಸಂಪುಟ ಮತ್ತು ಸರ್ಕಾರ ಆಗ ಶಿಫಾರಸು ಮಾಡಿತು.
eng_Latn
kan_Knda
Indian High Commissioner to the United Kingdom Braj Kumar Nehru said Gandhi's conviction would not harm her political career.
ಗಾಂಧಿ ಅಪರಾಧಿಯೆಂಬ ತೀರ್ಪಿನಿಂದ ಆಕೆಯ ರಾಜಕೀಯ ವೃತ್ತಿಜೀವನಕ್ಕೆ ಯಾವುದೇ ಹಾನಿಯಾಗದು ಎಂದು ಯುನೈಟೆಡ್‌ ಕಿಂಗ್ಡಮ್‌ಗೆ ಭಾರತದ ಹೈ ಕಮಿಷನರ್ ಆಗಿದ್ದ ಬ್ರಜ್ ಕುಮಾರ್ ನೆಹರೂ ಹೇಳಿದರು.
eng_Latn
kan_Knda
Appealed by its ideas but repelled by some of its tactics, he never could bring himself to buy Karl Marx's words as revealed gospel.
ಅದರ ಕಲ್ಪನೆಗಳಿಂದ ಆಕರ್ಷಿತರಾದರೂ ಅದರ ಕೆಲವಾರು ತಂತ್ರಗಳಿಂದ ಹಿಂಜರಿಯಬೇಕೆನಿಸಿದ್ದರಿಂದ ಆತ ಕಾರ್ಲ್ ಮಾರ್ಕ್ಸ್‌ನ ಮಾತುಗಳನ್ನು ವೇದವಾಕ್ಯವೆಂದು ನಂಬುವಂತೆ ತಮ್ಮನ್ನು ತಾವು ಒಪ್ಪಿಸಲು ಎಂದಿಗೂ ಸಾಧ್ಯವಾಗಲಿಲ್ಲ.
eng_Latn
kan_Knda
Nehru was one of the first leaders to demand that the Congress Party should resolve to make a complete and explicit break from all ties with the British Empire.
ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಸಾಮ್ರಾಜ್ಯದೊಂದಿಗಿನ ಎಲ್ಲಾ ಸಂಬಂಧಗಳನ್ನು ಸಂಪೂರ್ಣವಾಗಿ ಮತ್ತು ಸ್ಪಷ್ಟವಾಗಿ ಕಡಿದುಕೊಳ್ಳಲು ನಿರ್ಣಯಿಸಬೇಕೆಂದು ಒತ್ತಾಯಿಸಿದ ಮೊದಲ ನಾಯಕರಲ್ಲಿ ನೆಹರೂ ಒಬ್ಬರಾಗಿದ್ದರು.
eng_Latn
kan_Knda
His messengers gave him the message that Amar Singh got "afraid" by the happenings in Amber and Jodhpur and thought that his kingdom would also be annexed by the Mughals once again.
ಆಮೇರ್ ಮತ್ತು ಜೋಧಪುರದಲ್ಲಿ ನಡೆದ ಘಟನಾವಳಿಗಳಿಂದ ಅಮರ್ ಸಿಂಗ್ "ಭಯ"ಗೊಂಡು, ತನ್ನ ರಾಜ್ಯವನ್ನೂ ಮೊಘಲರು ಮತ್ತೊಮ್ಮೆ ವಶಪಡಿಸಿಕೊಳ್ಳಬಹುದು ಎಂದು ಯೋಚಿಸಿದನೆಂದು ಅವನ ದೂತರು ಅವನಿಗೆ ಸಂದೇಶವನ್ನು ನೀಡಿದರು.
eng_Latn
kan_Knda
Though Durgadas Rathore of the Rathore clan who was ambitious of conquering Jodhpur from the Mughals, took advantage of this opportunity and fought a war to prevent Aurangzeb getting hold of Ajit, he tore through Delhi with his men and successfully escorted the Prince and the widows of Jaswant Singh to Jodhpur.
ಆದರೂ, ಮೊಘಲರಿಂದ ಜೋಧಪುರವನ್ನು ವಶಪಡಿಸಿಕೊಳ್ಳುವ ಮಹತ್ತ್ವಾಕಾಂಕ್ಷೆಯನ್ನು ಹೊಂದಿದ್ದ ರಾಥೋಡ್ ವಂಶದ ದುರ್ಗಾದಾಸ್ ರಾಥೋಡ್ ಈ ಅವಕಾಶವನ್ನು ಬಳಸಿಕೊಂಡನು ಮತ್ತು ಅಜಿತ್‌ ಔರಂಗಜೇಬನ ಕೈವಶವಾಗುವುದನ್ನು ತಡೆಯಲು ಯುದ್ಧಕ್ಕಿಳಿದು ತನ್ನ ಸೈನಿಕರೊಂದಿಗೆ ದೆಹಲಿಯ ಮೇಲೆ ದಾಳಿ ಮಾಡಿ, ರಾಜಕುಮಾರನನ್ನು ಹಾಗೂ ಜಸ್ವಂತ್ ಸಿಂಗನ ವಿಧವೆಯರನ್ನು ಯಶಸ್ವಿಯಾಗಿ ಜೋಧಪುರಕ್ಕೆ ಕರೆದೊಯ್ದನು.
eng_Latn
kan_Knda
After ascending the throne, Shah made plans to annex Rajput kingdoms who declared independence after Aurangzeb's death.
ಸಿಂಹಾಸನವನ್ನು ಏರಿದ ಬಳಿಕ, ಶಾಹನು ಔರಂಗಜೇಬನ ಮರಣದ ನಂತರ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದ್ದ ರಜಪೂತ ರಾಜ್ಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದನು.
eng_Latn
kan_Knda
Shah ruled that because of the dispute, the region would become part of the Mughal empire and the city was renamed as Islamabad.
ಈ ವಿವಾದದಿಂದಾಗಿ ಈ ಪ್ರದೇಶವು ಮೊಘಲ್ ಸಾಮ್ರಾಜ್ಯದ ಭಾಗವಾಗಬೇಕೆಂದು ಶಾಹ್ ಆಜ್ಞೆಯಿತ್ತನು ಮತ್ತು ಆ ನಗರಕ್ಕೆ ಇಸ್ಲಾಮಾಬಾದ್ ಎಂದು ಮರುನಾಮಕರಣ ಮಾಡಲಾಯಿತು.
eng_Latn
kan_Knda
His histrionics come primarily in the form of his well-modulated baritone, conveying his emotions and of course, from the well-written lines.
ಆತನ ಅಭಿನಯವು ಮುಖ್ಯವಾಗಿ, ಆತನ ಭಾವನೆಗಳನ್ನು ವ್ಯಕ್ತಪಡಿಸುವ ಚೆನ್ನಾಗಿ-ಹದಗೊಂಡಿರುವ ಮಧ್ಯಮ ಶಾರೀರದ ರೂಪದಲ್ಲಿ, ಮತ್ತು ಸಹಜವಾಗಿಯೇ, ಚೆನ್ನಾಗಿ ಬರೆಯಲಾದ ಸಾಲುಗಳಿಂದ ಹೊಮ್ಮುತ್ತದೆ.
eng_Latn
kan_Knda
Patel practised law in Godhra, Borsad, and Anand while taking on the financial burdens of his homestead in Karamsad.
ಪಟೇಲ್ ಕರಮ್‌ಸದ್‌ನಲ್ಲಿದ್ದ ತಮ್ಮ ಮನೆಯ ಜಮೀನಿನ ಹಣಕಾಸಿನ ಹೊರೆಯನ್ನು ಹೊತ್ತು, ಗೋಧ್ರಾ, ಬೋರ್ಸದ್ ಮತ್ತು ಆನಂದ್‌ನಲ್ಲಿ ವಕೀಲಿ ವೃತ್ತಿಯನ್ನು ಮಾಡಿದರು.
eng_Latn
kan_Knda
He led the task of forging a united India, successfully integrating into the newly independent nation those British colonial provinces that formed the Dominion of India.
ಭಾರತ ಡೊಮಿನಿಯನ್‌ಅನ್ನು ರೂಪಿಸಿದ್ದ ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವತಂತ್ರವಾದ ರಾಷ್ಟ್ರದೊಂದಿಗೆ ಯಶಸ್ವಿಯಾಗಿ ಏಕೀಕರಿಸುವ ಮೂಲಕ ಆತ ಏಕೀಕೃತ ಭಾರತವನ್ನು ರಚಿಸುವ ಕಾರ್ಯದ ನೇತೃತ್ವ ವಹಿಸಿದರು.
eng_Latn
kan_Knda
Since Sikhs refused to accept authority of the Mughal court due to politics, Mahadji Shinde was given the regency with an agreement that Sikhs will not plunder the crown lands and they will be paid 1/3 of the Delhi revenue annually instead.
ರಾಜಕೀಯದಿಂದಾಗಿ ಸಿಖ್ಖರು ಮೊಘಲ್ ಆಸ್ಥಾನದ ಅಧಿಕಾರವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರಿಂದ, ಸಿಖ್ಖರು ಪ್ರಭುತ್ವದ ಭೂಮಿಯನ್ನು ಕೊಳ್ಳೆ ಹೊಡೆಯಬಾರದು ಮತ್ತು ಅದಕ್ಕೆ ಬದಲಾಗಿ ಅವರಿಗೆ ವಾರ್ಷಿಕವಾಗಿ ದೆಹಲಿಯ ಆದಾಯದ ೧/೩ರಷ್ಟನ್ನು ಪಾವತಿಸಲಾಗುವುದು ಎಂಬ ಒಪ್ಪಂದದೊಂದಿಗೆ ಮಹಾದಜೀ ಶಿಂದೆಗೆ ರಾಜಪ್ರತಿನಿಧಿಯಾಗಿ ಅಧಿಕಾರವಹಿಸಲಾಯಿತು.
eng_Latn
kan_Knda
In the year 1779, Mirza Najaf Khan carefully advanced his forces who successfully routed the treasonous Zabita Khan and his Sikh allies who lost more than 5,000 men in a single battle and never returned to threaten the Mughal Empire during the commander Mirza Najaf Khan's lifetime.
೧೭೭೯ರಲ್ಲಿ, ಮಿರ್ಜಾ ನಜಾಫ್ ಖಾನ್ ತನ್ನ ಪಡೆಗಳನ್ನು ಎಚ್ಚರಿಕೆಯಿಂದ ಮುನ್ನಡೆಸಿ, ರಾಜದ್ರೋಹಿ ಜ಼ಬಿತಾ ಖಾನ್ ಮತ್ತು ಅವನ ಸಿಖ್ ಮಿತ್ರರನ್ನು ಯಶಸ್ವಿಯಾಗಿ ಸೋಲಿಸಿದಾಗ, ಒಂದೇ ಯುದ್ಧದಲ್ಲಿ ೫,೦೦೦ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡ ಅವರು ಸೇನಾಧಿಪತಿ ಮಿರ್ಜಾ ನಜಾಫ್ ಖಾನನ ಜೀವಿತಾವಧಿಯಲ್ಲಿ ಮೊಘಲ್ ಸಾಮ್ರಾಜ್ಯಕ್ಕೆ ಬೆದರಿಕೆಯೊಡ್ಡಲು ಮತ್ತೆಂದೂ ಹಿಂತಿರುಗಲಿಲ್ಲ.
eng_Latn
kan_Knda
After killing Ghulam Qadir and restoring Shah Alam II to the throne, a Maratha garrison permanently occupied Delhi in 1788 and ruled on north India for next two decades until they were usurped by the British East India Company in the Second Anglo-Maratha War.
ಗುಲಾಮ್ ಖಾದಿರನನ್ನು ಹತ್ಯೆಗೈದು, ಎರಡನೇ ಷಾ ಆಲಂನನ್ನು ಪುನಃ ಸಿಂಹಾಸನಕ್ಕೇರಿಸಿದ ನಂತರ, ೧೭೮೮ರಲ್ಲಿ ಮರಾಠರ ಒಂದು ಕಾವಲುಪಡೆಯು ಶಾಶ್ವತವಾಗಿ ದೆಹಲಿಯನ್ನು ಆಕ್ರಮಿಸಿಕೊಂಡು, ಮುಂದೆ ಎರಡನೇ ಆಂಗ್ಲೋ-ಮರಾಠ ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಅವರಿಂದ ಅದನ್ನು ಕಿತ್ತುಕೊಳ್ಳುವವರೆಗೂ ಎರಡು ದಶಕಗಳ ಕಾಲ ಉತ್ತರ ಭಾರತವನ್ನು ಆಳಿತು.
eng_Latn
kan_Knda
The Battle of Buxar was fought on 22 October 1764 between the combined armies of Mir Qasim, the Nawab of Bengal; Shuja-ud-Daula the Nawab of Awadh; the Mughal Emperor Shah Alam II and the forces under the command of the British East India Company led by Hector Munro.
೧೭೬೪ರ ಅಕ್ಟೋಬರ್ ೨೨ರಂದು ನಡೆದ ಬಕ್ಸರ್ ಕದನವು ಬಂಗಾಳದ ನವಾಬ ಮೀರ್ ಕಾಸಿಮ್, ಅವಧ್‌ನ ನವಾಬ ಶುಜಾ-ಉದ್-ದೌಲಾ, ಮೊಘಲ್ ಸಾಮ್ರಾಟ ಎರಡನೇ ಷಾ ಆಲಂನ ಸಂಯುಕ್ತ ಪಡೆಗಳು ಮತ್ತು ಹೆಕ್ಟರ್ ಮನ್ರೋ ನೇತೃತ್ವವಹಿಸಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪಡೆಗಳ ನಡುವೆ ನಡೆಯಿತು.
eng_Latn
kan_Knda
Imad-ul-Mulk was the regent imposed by the Maratha Confederacy in 1757, who assassinated Alamgir II and prominent members of the imperial family, within the Maratha controlled city of Delhi; Shah Alam II managed to escape to safety with the Nawab of Awadh.
೧೭೫೭ರಲ್ಲಿ ಮರಾಠ ಒಕ್ಕೂಟದಿಂದ ವಿಧಿತನಾದ ರಾಜಪ್ರತಿನಿಧಿಯಾಗಿದ್ದ‌ ಇಮಾದ್-ಉಲ್-ಮುಲ್ಕ್, ಮರಾಠರ ನಿಯಂತ್ರಣದಲ್ಲಿದ್ದ ದೆಹಲಿ ನಗರದೊಳಗೆ ಎರಡನೇ ಆಲಂಗೀರ್ ಮತ್ತು ರಾಜಕುಟುಂಬದ ಪ್ರಮುಖ ಸದಸ್ಯರನ್ನು ಹತ್ಯೆಗೈದನು; ಎರಡನೇ ಷಾ ಆಲಂ ಅವಧ್‌ನ ನವಾಬನೊಂದಿಗೆ ಸುರಕ್ಷಿತ ಸ್ಥಳಕ್ಕೆ ಪಲಾಯನಗೈಯುವಲ್ಲಿ ಸಫಲನಾದನು.
eng_Latn
kan_Knda
After negotiations assuring peace Shah Alam II was escorted by the British to meet Mir Qasim the new Nawab of Bengal, who was nominated after the sudden death of Miran.
ಶಾಂತಿಯನ್ನು ಖಾತ್ರಿಪಡಿಸುವ ಮಾತುಕತೆಗಳ ನಂತರ, ಬ್ರಿಟಿಷರು ಎರಡನೇ ಷಾ ಆಲಂನನ್ನು, ಮೀರಾನ್‌ನ ಹಠಾತ್ ಮರಣದ ಬಳಿಕ ಬಂಗಾಳದ ಹೊಸ ನವಾಬನಾಗಿ ನಾಮನಿರ್ದೇಶಿತನಾಗಿದ್ದ ಮೀರ್ ಕಾಸಿಮನನ್ನು ಭೇಟಿ ಮಾಡಲು ಕರೆದೊಯ್ದರು.
eng_Latn
kan_Knda
Prince Ali Gauhar's father had been appointed Mughal Emperor by Vizier Imad-ul-Mulk and Maratha Peshwa's cousin Sadashivrao Bhau.
ಯುವರಾಜ ಅಲಿ ಗೌಹರನ ತಂದೆಯನ್ನು ವಜೀರನಾದ ಇಮಾದ್-ಉಲ್-ಮುಲ್ಕ್ ಮತ್ತು ಮರಾಠ ಪೇಶ್ವೆಯ ಸೋದರಸಂಬಂಧಿಯಾದ ಸದಾಶಿವರಾವ್ ಭಾವೂ ಮೊಘಲ್ ಸಾಮ್ರಾಟನಾಗಿ ನೇಮಿಸಿದ್ದರು.
eng_Latn
kan_Knda
Prince Ali Gauhar, afterwards Emperor Shah Alam II, had been the heir apparent of his father Alamgir II.
ತರುವಾಯ ಚಕ್ರವರ್ತಿ ಎರಡನೇ ಷಾ ಆಲಂ ಎಂದು ಹೆಸರಾದ ಯುವರಾಜ ಅಲಿ ಗೌಹರನು ತನ್ನ ತಂದೆ ಎರಡನೇ ಆಲಂಗೀರನ ಅಗ್ರಪಟ್ಟಾಧಿಕಾರಿಯಾಗಿದ್ದನು.
eng_Latn
kan_Knda
His quarrels with that amir, and fear for his own life, caused him to flee from Delhi in 1758.
ಆ ಅಮೀರನೊಂದಿಗಿನ ಆತನ ಜಗಳಗಳು ಮತ್ತು ತನ್ನ ಜೀವಭಯವು ೧೭೫೮ರಲ್ಲಿ ಆತ ದೆಹಲಿಯನ್ನು ಬಿಟ್ಟು ಓಡಿಹೋಗುವಂತೆ ಮಾಡಿದವು.
eng_Latn
kan_Knda
Narayan was commissioned by the government of Karnataka to write a book to promote tourism in the state.
ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಪುಸ್ತಕವನ್ನು ಬರೆಯಲು ನಾರಾಯಣ್‌ರನ್ನು ನೇಮಿಸಿತು.
eng_Latn
kan_Knda
The parrot greatly praised Padmavati's beauty in front of Ratan Sen, who became determined to marry Padmavati.
ಗಿಳಿಯು ರತನ್‌ ಸೇನನ ಮುಂದೆ ಪದ್ಮಾವತಿಯ ಸೌಂದರ್ಯವನ್ನು ಬಹುವಾಗಿ ಹೊಗಳಿದ್ದರಿಂದ ಆತ ಪದ್ಮಾವತಿಯನ್ನು ಮದುವೆಯಾಗಲು ದೃಢನಿಶ್ಚಯ ಮಾಡಿದನು.
eng_Latn
kan_Knda
Raghav Chetan went to the court of Alauddin Khalji, the Sultan of Delhi, and told him about the exceptionally beautiful Padmavati.
ರಾಘವ್ ಚೇತನ್, ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯ ಆಸ್ಥಾನಕ್ಕೆ ಹೋಗಿ, ಆತನಿಗೆ ಅಸಾಧಾರಣ ಸೌಂದರ್ಯದಿಂದ ಕೂಡಿದ್ದ ಪದ್ಮಾವತಿಯ ಬಗ್ಗೆ ಹೇಳಿದನು.
eng_Latn
kan_Knda
It was trapped by a bird catcher and sold to a Brahmin.
ಅದನ್ನು ಹಕ್ಕಿ ಹಿಡಿಯುವವನೊಬ್ಬ ಪಂಜರದಲ್ಲಿ ಹಿಡಿದು ಬ್ರಾಹ್ಮಣನೊಬ್ಬನಿಗೆ ಮಾರಿದನು.
eng_Latn
kan_Knda
Following the partition of India in 1947, he was reassigned to the 8th Gorkha Rifles.
೧೯೪೭ರಲ್ಲಿ ಭಾರತದ ವಿಭಜನೆಯಾದ ನಂತರ, ಆತನನ್ನು ೮ನೇ ಗೋರ್ಖಾ ರೈಫಲ್ಸ್‌ಗೆ ಮರು ನೇಮಕ ಮಾಡಲಾಯಿತು.
eng_Latn
kan_Knda
He was commissioned into the 4th Battalion, 12th Frontier Force Regiment.
ಆತ ೧೨ನೇ ಫ್ರಾಂಟಿಯರ್ ಫೋರ್ಸ್ ರೆಜಿಮೆಂಟಿನ ೪ನೇ ಬೆಟಾಲಿಯನ್ನಿಗೆ ನಿಯೋಜನೆಗೊಂಡರು.
eng_Latn
kan_Knda
In 1990, he published his next novel, The World of Nagaraj, also set in Malgudi.
೧೯೯೦ರಲ್ಲಿ, ಆತ ಮಾಲ್ಗುಡಿಯಲ್ಲೇ ನಡೆಯುವ ತಮ್ಮ ಮುಂದಿನ ಕಾದಂಬರಿ ದಿ ವರ್ಲ್ಡ್ ಆಫ್ ನಾಗರಾಜ್‌ಅನ್ನು ಪ್ರಕಟಿಸಿದರು.
eng_Latn
kan_Knda
His active military career spanned four decades and five wars, beginning with service in the British Indian Army in World War II.
ಎರಡನೇ ವಿಶ್ವ ಯುದ್ಧದಲ್ಲಿ ಭಾರತೀಯ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಪ್ರಾರಂಭವಾದ ಆತ ಸಕ್ರಿಯ ಸೇನಾ ವೃತ್ತಿಜೀವನವು, ನಾಲ್ಕು ದಶಕಗಳು ಮತ್ತು ಐದು ಯುದ್ಧಗಳ ಪರ್ಯಂತ ವ್ಯಾಪಿಸಿತ್ತು.
eng_Latn
kan_Knda
The Buddhist and Hindu sources present different versions of how Chandragupta met Chanakya.
ಬೌದ್ಧ ಮತ್ತು ಹಿಂದೂ ಮೂಲಗಳು ಚಂದ್ರಗುಪ್ತನು ಚಾಣಕ್ಯನನ್ನು ಹೇಗೆ ಭೇಟಿಯಾದನು ಎಂಬುದಕ್ಕೆ ವಿಭಿನ್ನ ಕಥನಗಳನ್ನು ಪ್ರಸ್ತುತಪಡಿಸುತ್ತವೆ.
eng_Latn
kan_Knda
In exchange, he asked the mother to give up the boy and let him adopt him at a later date.
ಇದಕ್ಕೆ ಪ್ರತಿಯಾಗಿ, ಮಗನನ್ನು ಬಿಟ್ಟುಬಿಡುವಂತೆ ಮತ್ತು ಆಮೇಲೆ ಒಂದು ದಿನ ತಾನು ಅವನನ್ನು ದತ್ತು ತೆಗೆದುಕೊಳ್ಳುವುದನ್ನು ಒಪ್ಪುವಂತೆ ಆತ ಆ ತಾಯಿಯನ್ನು ಕೇಳಿದನು.
eng_Latn
kan_Knda
According to the Digambara legend by Hemachandra, Chanakya was a Jain layperson and a Brahmin.
ಹೇಮಚಂದ್ರನ ದಿಗಂಬರ ದಂತಕಥೆಯ ಪ್ರಕಾರ, ಚಾಣಕ್ಯ ಒಬ್ಬ ಸಾಮಾನ್ಯ ಜೈನ ಮತ್ತು ಬ್ರಾಹ್ಮಣನಾಗಿದ್ದನು.
eng_Latn
kan_Knda
One of his early favorite wives was a Rajput princess, Jagat Gosain Begum, daughter of Raja Udai Singh Rathore of Marwar.
ಮಾರ್ವಾಡದ ರಾಜ ಉದಯ್ ಸಿಂಗ್ ರಾಥೋಡನ ಮಗಳಾದ ರಜಪೂತ ರಾಜಕುಮಾರಿ ಜಗತ್ ಗೋಸೈನ್ ಬೇಗಂ ಆರಂಭದಲ್ಲಿ ಆತನ ನೆಚ್ಚಿನ ಪತ್ನಿಯರಲ್ಲಿ ಒಬ್ಬಳಾಗಿದ್ದಳು.
eng_Latn
kan_Knda
Baji Rao compared the Mughals' declining fortune to a tree which, if attacked at its roots, would collapse.
ಬಾಜೀ ರಾವ್, ಮೊಘಲರ ಅವನತಿಯ ಅದೃಷ್ಟವನ್ನು ಮರಕ್ಕೆ ಹೋಲಿಸಿ, ಅದರ ಬೇರುಗಳ ಮೇಲೆ ದಾಳಿ ಮಾಡಿದರೆ ಅದು ಉರುಳಿ ಬೀಳುತ್ತದೆ ಎನ್ನುತ್ತಿದ್ದನು.
eng_Latn
kan_Knda
You know that today the dominion of the world is enjoyed by the one who possesses the greatest strength.
ಇಂದು ವಿಶ್ವದ ಪ್ರಭುತ್ವವನ್ನು ಅತ್ಯಂತ ಹೆಚ್ಚು ಬಲಶಾಲಿಯಾದ ವ್ಯಕ್ತಿಯು ಆನಂದಿಸುತ್ತಾನೆ ಎಂದು ನಿಮಗೆ ತಿಳಿದಿದೆ.
eng_Latn
kan_Knda
According to this text, Padmini handed over the responsibility of her two sons to Alauddin before her death by committing Jauhar.
ಈ ಕೃತಿಯ ಪ್ರಕಾರ, ಪದ್ಮಿನಿಯು ಜೌಹರ್ ಮೂಲಕ ತಾನು ಸಾವನ್ನಪ್ಪುವ ಮೊದಲು ತನ್ನ ಇಬ್ಬರು ಪುತ್ರರ ಜವಾಬ್ದಾರಿಯನ್ನು ಅಲ್ಲಾವುದ್ದೀನ್‌ಗೆ ವಹಿಸಿದಳು.
eng_Latn
kan_Knda
The lineage of Lakshmansinha survives through Arun's son, with a poor forest-dwelling woman named Rukma.
ಲಕ್ಷ್ಮಣಸಿಂಹನ ವಂಶಾವಳಿಯು ರುಕ್ಮಾ ಎಂಬ ಬಡ ಅರಣ್ಯವಾಸಿ ಮಹಿಳೆಯಲ್ಲಿ ಜನಿಸಿದ ಅರುಣನ ಮಗನ ಮೂಲಕ ಉಳಿಯುತ್ತದೆ.
eng_Latn
kan_Knda
His claim that he too was a farmer in the advertisements was questioned in courts.
ತಾನೂ ರೈತನಾಗಿದ್ದೆ ಎಂದು ಜಾಹೀರಾತುಗಳಲ್ಲಿದ್ದ ಆತನ ಹೇಳಿಕೆಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಯಿತು.
eng_Latn
kan_Knda
The match per the customs prevailing at that time was arranged by the couple's parents.
ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿಯ ಪ್ರಕಾರ, ದಂಪತಿಯ ಪೋಷಕರು ಜೋಡಿಯನ್ನು ನಿರ್ಧರಿಸಿದ್ದರು.
eng_Latn
kan_Knda
Meanwhile, at school, he developed a reputation as a child prodigy.
ಈ ಮಧ್ಯೆ, ಶಾಲೆಯಲ್ಲಿ ಆತ ಅದ್ಭುತ ಪ್ರತಿಭೆಯುಳ್ಳ ಮಗುವಾಗಿ ಖ್ಯಾತಿ ಗಳಿಸಿದರು.
eng_Latn
kan_Knda
"It was the greatest source of encouragement for me," Tendulkar said nearly 20 years later after surpassing Gavaskar's world record of 34 Test centuries.
ಸುಮಾರು ೨೦ ವರ್ಷಗಳ ನಂತರ ತಾನು ಗವಾಸ್ಕರರ ೩೪ ಟೆಸ್ಟ್ ಶತಕಗಳ ವಿಶ್ವ ದಾಖಲೆಯನ್ನು ಮೀರಿದಾಗ, "ಅದು ನನಗೆ ಬಹಳ ದೊಡ್ಡ ಸ್ಪೂರ್ತಿಯ ಸೆಲೆಯಾಗಿತ್ತು" ಎಂದು ತೆಂಡೂಲ್ಕರ್ ಹೇಳಿದರು.
eng_Latn
kan_Knda
Since Singh refused to drop them, Congress withdrew its support and President Reddy dissolved Parliament in August 1979.
ಅವರನ್ನು ಕೈಬಿಡಲು ಸಿಂಗ್ ನಿರಾಕರಿಸಿದ್ದರಿಂದ, ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು ಮತ್ತು ಅಧ್ಯಕ್ಷ ರೆಡ್ಡಿ ೧೯೭೯ರ ಆಗಸ್ಟ್‌ನಲ್ಲಿ ಸಂಸತ್ತನ್ನು ವಿಸರ್ಜಿಸಿದರು.
eng_Latn
kan_Knda
Several marriages of her eldest son Salim and her foster son, Daniyal, were held at her palace.
ಅವಳ ಹಿರಿಯ ಮಗ ಸಲೀಂ ಮತ್ತು ಅವಳ ಸಾಕುಮಗ ದಾನಿಯಲ್‌ನ ಹಲವಾರು ವಿವಾಹಗಳು ಅವಳ ಅರಮನೆಯಲ್ಲಿ ನಡೆದವು.
eng_Latn
kan_Knda
There was no Mughal tradition of primogeniture, the systematic passing of rule, upon an emperor's death, to his eldest son.
ಒಬ್ಬ ಚಕ್ರವರ್ತಿಯ ಸಾವಿನ ನಂತರ ಅವನ ಹಿರಿಯ ಮಗನಿಗೆ ಕ್ರಮಬದ್ಧವಾಗಿ ಆಳ್ವಿಕೆಯನ್ನು ವಹಿಸುವ, ಜ್ಯೇಷ್ಠಾಧಿಕಾರದ ಯಾವುದೇ ಮೊಘಲ್ ಸಂಪ್ರದಾಯವಿರಲಿಲ್ಲ.
eng_Latn
kan_Knda
Some accounts state that Sambhaji's body was cut into pieces and thrown into the river or that the body or portions were recaptured and cremated at the confluence of rivers at Tulapur.
ಸಂಭಾಜಿಯ ದೇಹವನ್ನು ತುಂಡುತುಂಡುಗಳಾಗಿ ಕತ್ತರಿಸಿ ನದಿಯಲ್ಲಿ ಎಸೆಯಲಾಯಿತು ಅಥವಾ ಆತನ ದೇಹ ಇಲ್ಲವೇ ಭಾಗಗಳನ್ನು ಪುನರ್ವಶಪಡಿಸಿಕೊಂಡು ತುಳಾಪುರದ ನದೀ ಸಂಗಮದಲ್ಲಿ ದಹನ ಮಾಡಲಾಯಿತು ಎಂದು ಕೆಲವು ದಾಖಲೆಗಳು ಹೇಳುತ್ತವೆ.
eng_Latn
kan_Knda
Shortly following Sambhaji's accession, he began his military campaigns against neighbouring states.
ಸಂಭಾಜಿಯು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಆತ ನೆರೆಯ ರಾಜ್ಯಗಳ ವಿರುದ್ಧ ತನ್ನ ಸೈನಿಕ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದನು.
eng_Latn
kan_Knda
He also seems to have made Sambhaji familiar with the famous works of different sciences and music written by ancient scholars in the Sanskrit language.
ಆತ ಪ್ರಾಚೀನ ವಿದ್ವಾಂಸರು ಸಂಸ್ಕೃತ ಭಾಷೆಯಲ್ಲಿ ಬರೆದ ವಿವಿಧ ವಿಜ್ಞಾನಗಳು ಮತ್ತು ಸಂಗೀತದ ಪ್ರಸಿದ್ಧ ಕೃತಿಗಳನ್ನೂ ಸಂಭಾಜಿಗೆ ಪರಿಚಯಿಸಿರಬಹುದೆಂದು ತೋರುತ್ತದೆ.
eng_Latn
kan_Knda
He seems to have deeper knowledge of the different forms of Sanskrit literature; Hindu jurisprudence and the Puranas.
ಆತ ಸಂಸ್ಕೃತ ಸಾಹಿತ್ಯದ ಭಿನ್ನ ಪ್ರಕಾರಗಳಾದ ಹಿಂದೂ ನ್ಯಾಯಶಾಸ್ತ್ರ ಮತ್ತು ಪುರಾಣಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದನೆಂದು ತೋರುತ್ತದೆ.
eng_Latn
kan_Knda
On 18 June, he acquired control of Raigad Fort.
ಜೂನ್ ೧೮ರಂದು ಆತ ರಾಯಗಢ ಕೋಟೆಯ ಮೇಲೆ ನಿಯಂತ್ರಣವನ್ನು ಸಾಧಿಸಿದನು.
eng_Latn
kan_Knda
The most notable is Budhbhushanam written in Marathi and Sanskrit, and three other books, Nayikabhed, Saatsatak, Nakhshikha are in Hindustani language.
ಅತ್ಯಂತ ಗಮನಾರ್ಹವಾದದ್ದು ಮರಾಠಿ ಮತ್ತು ಸಂಸ್ಕೃತದಲ್ಲಿ ಬರೆದ ಬುಧ್‌ಭೂಷಣಮ್, ಮತ್ತು ಇತರ ಮೂರು ಪುಸ್ತಕಗಳಾದ ನಾಯಿಕಾಭೇದ್, ಸಾತ್‌ಶತಕ್, ನಖಶಿಖಾ ಇವು ಹಿಂದೂಸ್ತಾನಿ ಭಾಷೆಯಲ್ಲಿವೆ.
eng_Latn
kan_Knda
Many other written and oral traditional versions of her life exist in Hindu and Jain traditions.
ಆಕೆಯ ಜೀವನದ ಅನೇಕ ಇತರ ಲಿಖಿತ ಮತ್ತು ಮೌಖಿಕ ಸಾಂಪ್ರದಾಯಿಕ ಆವೃತ್ತಿಗಳು ಹಿಂದೂ ಮತ್ತು ಜೈನ ಪರಂಪರೆಗಳಲ್ಲಿ ಅಸ್ತಿತ್ವದಲ್ಲಿವೆ.
eng_Latn
kan_Knda
The 1687 Battle of Wai saw the Maratha forces badly weakened by the Mughals.
೧೬೮೭ರ ವಾಯಿ ಕದನದಲ್ಲಿ ಮೊಘಲರು ಮರಾಠ ಪಡೆಗಳನ್ನು ಬಹಳವೇ ದುರ್ಬಲಗೊಳಿಸಿದರು.
eng_Latn
kan_Knda
In 1948, after the assassination of Mahatma Gandhi, the team of Husanlal Bhagatram-Rajendra Krishan-Rafi had overnight created the song "Suno Suno Ae Duniyawalon, Bapuji Ki Amar Kahani".
೧೯೪೮ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಹುಸನ್‌ಲಾಲ್ ಭಗತ್ ರಾಮ್-ರಾಜೇಂದ್ರ ಕೃಷ್ಣನ್-ರಫಿ ಅವರ ತಂಡವು ರಾತ್ರೋರಾತ್ರಿ “ಸುನೋ ಸುನೋ ಏ ದುನಿಯಾವಾಲೋಂ, ಬಾಪೂಜಿ ಕೀ ಅಮರ್ ಕಹಾನಿ” ಎಂಬ ಹಾಡನ್ನು ರಚಿಸಿತ್ತು.
eng_Latn
kan_Knda
Chandragupta's life and accomplishments are described in ancient Hindu, Buddhist Jain and Greek texts.
ಚಂದ್ರಗುಪ್ತನ ಜೀವನ ಮತ್ತು ಸಾಧನೆಗಳನ್ನು ಪ್ರಾಚೀನ ಹಿಂದೂ, ಬೌದ್ಧ, ಜೈನ ಮತ್ತು ಗ್ರೀಕ್ ಪಠ್ಯಗಳಲ್ಲಿ ವಿವರಿಸಲಾಗಿದೆ.
eng_Latn
kan_Knda
Sultan Alau'd-Din's two sons became kings in succession, Sultan Shihabu'd-Din and Sultan Qutbu'd-Din.
ಸುಲ್ತಾನ್ ಅಲಾವುದ್ದೀನ್‌ನ ಇಬ್ಬರು ಪುತ್ರರಾದ ಸುಲ್ತಾನ್ ಶಿಹಾಬುದ್ದೀನ್ ಮತ್ತು ಸುಲ್ತಾನ್ ಕುತ್ಬುದ್ದೀನ್ ಅನುಕ್ರಮವಾಗಿ ರಾಜರಾದರು.
eng_Latn
kan_Knda
According to modern calculations, this solar eclipse took place on 21 May 616 CE, which would mean that Pulakeshin ascended the throne in 609 CE.
ಆಧುನಿಕ ಲೆಕ್ಕಾಚಾರದ ಪ್ರಕಾರ, ಈ ಸೂರ್ಯಗ್ರಹಣವು ಸಾ.ಶ. ೬೧೬ರ ಮೇ ೨೧ರಂದು ಸಂಭವಿಸಿತು, ಅಂದರೆ ಪುಲಕೇಶಿಯು ಸಾ.ಶ. ೬೦೯ರಲ್ಲಿ ಸಿಂಹಾಸನವನ್ನು ಏರಿದನು.
eng_Latn
kan_Knda
When Mughal workers came to repair a bridge in the village, his followers disinformed them that he was preparing to attack Delhi via Ajmer.
ಮೊಘಲ್ ಕಾರ್ಮಿಕರು ಗ್ರಾಮದ ಸೇತುವೆಯೊಂದನ್ನು ದುರಸ್ತಿ ಮಾಡಲು ಬಂದಾಗ, ಅಜ್ಮೀರ್ ಮೂಲಕ ದೆಹಲಿಯ ಮೇಲೆ ದಾಳಿ ಮಾಡಲು ಆತ ಸಿದ್ಧತೆ ನಡೆಸಿದ್ದಾನೆಂದು ಆತನ ಅನುಯಾಯಿಗಳು ಅವರಿಗೆ ಸುಳ್ಳುಮಾಹಿತಿ ನೀಡಿದರು.
eng_Latn
kan_Knda
In mid-2016, Narayan's former home in Mysore was converted into a museum in his honour.
೨೦೧೬ರ ಮಧ್ಯಭಾಗದಲ್ಲಿ, ಮೈಸೂರಿನಲ್ಲಿರುವ ನಾರಾಯಣ್ ಅವರ ಮುಂಚಿನ ಮನೆಯನ್ನು ಅವರ ಗೌರವಾರ್ಥ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.
eng_Latn
kan_Knda
In April 2014, he said that Modi would not make a good Prime Minister.
೨೦೧೪ರ ಏಪ್ರಿಲ್‌ನಲ್ಲಿ, ಆತ ಮೋದಿ ಉತ್ತಮ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದ್ದರು.
eng_Latn
kan_Knda
Sen was critical of Indian politician Narendra Modi when he was announced as their prime ministerial candidate by the BJP.
ಭಾರತೀಯ ರಾಜಕಾರಣಿ ನರೇಂದ್ರ ಮೋದಿಯನ್ನು ಬಿ.ಜೆ.ಪಿ.ಯು ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ಸೇನ್ ಆತನನ್ನು ಟೀಕಿಸಿದ್ದರು.
eng_Latn
kan_Knda
Narayan's short stories have been compared with those of Guy de Maupassant because of his ability to compress a narrative.
ನಾರಾಯಣ್ ಅವರ ಸಣ್ಣ ಕಥೆಗಳನ್ನು ಗಯ್ ಡಿ ಮೊಪಾಸಾ ಅವರ ಸಣ್ಣ ಕಥೆಗಳೊಂದಿಗೆ ಹೋಲಿಸಲಾಗಿದೆ, ಏಕೆಂದರೆ ಆತ ಕಥನವನ್ನು ಅಡಕವಾಗಿಸುವ ಸಾಮರ್ಥ್ಯವನ್ನು ಹೊಂದಿದ್ದರು.
eng_Latn
kan_Knda
Sambhaji's rule was largely shaped by the ongoing wars between the Maratha Empire and the Mughal Empire, as well as other neighbouring powers such as the Siddis, Mysore, and the Portuguese in Goa.
ಸಂಭಾಜಿಯ ಆಡಳಿತವು ಬಹುಮಟ್ಟಿಗೆ, ಆಗ ಮರಾಠ ಸಾಮ್ರಾಜ್ಯ ಮತ್ತು ಮೊಘಲ್ ಸಾಮ್ರಾಜ್ಯದ ನಡುವೆ, ಹಾಗೆಯೇ ಇತರ ನೆರೆಯ ಶಕ್ತಿಗಳಾದ ಸಿದ್ದಿ, ಮೈಸೂರು ಮತ್ತು ಗೋವಾದಲ್ಲಿನ ಪೋರ್ಚುಗೀಸರೊಂದಿಗೆ ನಡೆಯುತ್ತಿದ್ದ ಯುದ್ಧಗಳಿಂದ ರೂಪಿತವಾಯಿತು.
eng_Latn
kan_Knda
In July 2003, Prime Minister Vajpayee visited China, and met various Chinese leaders.
೨೦೦೩ರ ಜುಲೈಯಲ್ಲಿ ಪ್ರಧಾನಿ ವಾಜಪೇಯಿ ಚೀನಾಕ್ಕೆ ಭೇಟಿ ನೀಡಿದರು ಮತ್ತು ವಿವಿಧ ಚೀನೀ ನಾಯಕರನ್ನು ಭೇಟಿಯಾದರು.
eng_Latn
kan_Knda
The NDA was widely expected to retain power after the 2004 general election.
೨೦೦೪ರ ಸಾರ್ವತ್ರಿಕ ಚುನಾವಣೆಯ ನಂತರ ಎನ್.ಡಿ.ಎ. ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು.
eng_Latn
kan_Knda
In 2003, news reports suggested a tussle within the BJP with regard to sharing of leadership between Vajpayee and Deputy Prime Minister LK Advani.
೨೦೦೩ರಲ್ಲಿ, ವಾಜಪೇಯಿ ಮತ್ತು ಉಪಪ್ರಧಾನಿ ಎಲ್.ಕೆ. ಅಡ್ವಾಣಿ ನಡುವೆ ನಾಯಕತ್ವದ ಹಂಚಿಕೆಗೆ ಸಂಬಂಧಿಸಿದಂತೆ ಬಿ.ಜೆ.ಪಿ.ಯೊಳಗೆ ಸೆಣೆಸಾಟವಿದೆ ಎಂದು ಮಾಧ್ಯಮ ವರದಿಗಳು ಸೂಚಿಸಿದವು.
eng_Latn
kan_Knda
The act was aimed at curbing terrorist threats by strengthening powers of government authorities to investigate and act against suspects.
ಈ ಕಾಯ್ದೆಯು ಶಂಕಿತರ ವಿರುದ್ಧ ತನಿಖೆ ಮತ್ತು ಕ್ರಮ ಕೈಗೊಳ್ಳಲು ಸರ್ಕಾರಿ ಅಧಿಕಾರಿಗಳ ಅಧಿಕಾರವನ್ನು ಬಲಪಡಿಸುವ ಮೂಲಕ ಭಯೋತ್ಪಾದಕ ಬೆದರಿಕೆಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿತ್ತು.
eng_Latn
kan_Knda
He lost to Raja Mahendra Pratap in Mathura, but was elected from Balrampur.
ಆತ ಮಥುರಾದಲ್ಲಿ ರಾಜ ಮಹೇಂದ್ರ ಪ್ರತಾಪ್ ವಿರುದ್ಧ ಸೋತರಾದರೂ, ಬಲರಾಮಪುರದಿಂದ ಚುನಾಯಿತರಾದರು.
eng_Latn
kan_Knda
In 1951, Vajpayee was seconded by the RSS, along with Deendayal Upadhyaya, to work for the newly formed Bharatiya Jana Sangh, a Hindu right-wing political party associated with the RSS.
೧೯೫೧ರಲ್ಲಿ ಹೊಸದಾಗಿ ರಚನೆಗೊಂಡಿದ್ದ, ಆರ್.ಎಸ್.ಎಸ್.ನೊಂದಿಗೆ ಗುರುತಿಸಿಕೊಂಡ ಹಿಂದೂ ಬಲಪಂಥೀಯ ರಾಜಕೀಯ ಪಕ್ಷವಾದ ಭಾರತೀಯ ಜನ ಸಂಘದ ಕೆಲಸ ಮಾಡಲು ದೀನದಯಾಳ ಉಪಾಧ್ಯಾಯರೊಂದಿಗೆ ವಾಜಪೇಯಿಯವರನ್ನು ಆರ್.ಎಸ್.ಎಸ್. ಅನುಮೋದಿಸಿತು.
eng_Latn
kan_Knda
The son of Motilal Nehru, a prominent lawyer and Indian nationalist, Jawaharlal Nehru was educated in Englandat Harrow School and Trinity College, Cambridge, and trained in the law at the Inner Temple.
ಖ್ಯಾತ ವಕೀಲ ಮತ್ತು ಭಾರತೀಯ ರಾಷ್ಟ್ರೀಯವಾದಿ ಮೋತಿಲಾಲ್ ನೆಹರೂರವರ ಮಗ ಜವಾಹರಲಾಲ್ ನೆಹರೂ ಇಂಗ್ಲೆಂಡಿನ ಹ್ಯಾರೊ ಶಾಲೆ ಮತ್ತು ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು ಮತ್ತು ಇನ್ನರ್ ಟೆಂಪಲ್‌ನಲ್ಲಿ ಕಾನೂನು ತರಬೇತಿ ಪಡೆದರು.
eng_Latn
kan_Knda
Rahm was the largest Indian ship sailing in the Red Sea and was known to the Europeans as the "great pilgrimage ship".
ರೆಹಮ್ ಕೆಂಪು ಸಮುದ್ರದಲ್ಲಿ ಸಂಚರಿಸುವ ಅತಿದೊಡ್ಡ ಭಾರತೀಯ ಹಡಗಾಗಿತ್ತು ಮತ್ತು ಐರೋಪ್ಯರಿಗೆ "ಶ್ರೇಷ್ಠ ತೀರ್ಥಯಾತ್ರೆಯ ಹಡಗು" ಎಂದು ಪರಿಚಿತವಾಗಿತ್ತು.
eng_Latn
kan_Knda
Franchise retail outlets were started and they sold the "Only Vimal" brand of textiles.
ಫ್ರ್ಯಾ಼ಂಚೈಸಿನ ಚಿಲ್ಲರೆ ಮಳಿಗೆಗಳನ್ನು ಪ್ರಾರಂಭಿಸಿ, ಅಲ್ಲಿ "ಓನ್ಲಿ ವಿಮಲ್" ಬ್ರ್ಯಾಂಡಿನ ಜವಳಿಯನ್ನು ಮಾರಾಟ ಮಾಡಲಾಯಿತು.
eng_Latn
kan_Knda
John Keay called her 'The Philosopher Queen', a reference perhaps to the 'Philosopher king' Bhoj.
ಜಾನ್ ಕೀ, ಆಕೆಯನ್ನು 'ದಿ ಫಿಲಾಸಫರ್ ಕ್ವೀನ್' ಎಂದು ಕರೆದರು, ಅದು ಬಹುಶಃ 'ಫಿಲಾಸಫರ್ ಕಿಂಗ್' ಎನಿಸಿದ್ದ ಭೋಜನಿಗೆ ಹೋಲಿಸಿದ್ದಿರಬಹುದು.
eng_Latn
kan_Knda
In Bengal, for example, food production, while down on the previous year, was higher than in previous non-famine years.
ಉದಾಹರಣೆಗೆ, ಬಂಗಾಳದಲ್ಲಿ, ಕಳೆದ ವರ್ಷ ಆಹಾರದ ಉತ್ಪಾದನೆ ಕಡಿಮೆಯಾಗಿದ್ದರೂ, ಅದು ಹಿಂದಿನ, ಬರಗಾಲವಿರದ ವರ್ಷಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು.
eng_Latn
kan_Knda
In Poverty and Famines, Sen revealed that in many cases of famine, food supplies were not significantly reduced.
ಪಾವರ್ಟಿ ಅಂಡ್‌ ಫ್ಯಾಮಿನ್ಸ್‌ನಲ್ಲಿ, ಬರಗಾಲದ ಅನೇಕ ಸಂದರ್ಭಗಳಲ್ಲಿ, ಆಹಾರದ ಸರಬರಾಜು ಗಣನೀಯವಾಗಿಯೇನೂ ಕಡಿಮೆಯಾಗಿರಲಿಲ್ಲ ಎಂದು ಸೇನ್ ಬಹಿರಂಗಪಡಿಸಿದರು.
eng_Latn
kan_Knda
Sen points to a number of social and economic factors, such as declining wages, unemployment, rising food prices, and poor food-distribution, which led to starvation.
ಹಸಿವಿನಿಂದ ಕಂಗಾಲಾಗುವಂತೆ ಮಾಡಿದ ವೇತನ ಕುಸಿತ, ನಿರುದ್ಯೋಗ, ಹೆಚ್ಚುತ್ತಿರುವ ಆಹಾರದ ಬೆಲೆ ಮತ್ತು ಕಳಪೆ ಆಹಾರ ವಿತರಣೆಯಂತಹ ಹಲವಾರು ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಸೇನ್ ಸೂಚಿಸುತ್ತಾರೆ.
eng_Latn
kan_Knda
For instance, in the United States citizens have a right to vote.
ಉದಾಹರಣೆಗೆ, ಸಂಯುಕ್ತ ಸಂಸ್ಥಾನದಲ್ಲಿ ನಾಗರಿಕರಿಗೆ ಮತದಾನದ ಹಕ್ಕಿದೆ.
eng_Latn
kan_Knda
He has also served as President of the Development Studies Association and the Human Development and Capability Association.
ಆತ ಅಭಿವೃದ್ಧಿ ಅಧ್ಯಯನ ಸಂಘ ಮತ್ತು ಮಾನವ ಅಭಿವೃದ್ಧಿ ಮತ್ತು ಸಾಮರ್ಥ್ಯ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
End of preview. Expand in Data Studio
README.md exists but content is empty.
Downloads last month
10