| ಧಾರವಾಡ ಸವಿ ನೆನಪುಗಳು |
| ಕಾಡಕತ್ತವಾ |
| ಧಾರವಾಡ ಮಳೆಯಂಗ |
| ಆದರೇನು ಮಾಡುವುದೂ |
| ಮಳೆಗಾಲಕ್ಕೆ ಇನ್ನೂ ಎರಡು ತಿಂಗಳ ಬಾಕಿ ಅದ |
| ಅಲ್ಲಿವರೆಗೂ |
| ಹಾಳಾದ ಈ ಬಿಸಿಲಿನ ಕಾಟಕ್ಕೆ |
| ನಡುನಡುವೆ ನೆನಪುಗಳ |
| ಬೆವರಿನ ಜಳಕ…! |
| ಹೀಗಿತ್ತು ಧಾರವಾಡದ ಬದುಕು |
| ಬೇಕಾಗಿದ್ದು ಎಲ್ಲ ಇತ್ತು |
| ಹಸಿವು ಇತ್ತು, ಓದಿನ ಖುಷಿ ಇತ್ತು |
| ಹಣದ ಕೊರತೆ ಇತ್ತು |
| ಬದುಕಿನ ಚಿಂತಿ ಇತ್ತು |
| ಆದರೂ ಏನಾದರೂ ಮಾಡಬೇಕು ಎನ್ನುವ ಛಲ ಇತ್ತು |
| ಒಳ್ಳೆಯ ಗೆಳೆಯರು ಬಳಗ ಇತ್ತು |
| ಚಿಂತನೆ ಇತ್ತು ಚಿಂತಿಸುವ |
| ಜೀವಗಳಿದ್ದವು |
| ರಾತ್ರಿ ಕನಸುಗಳಿಗೆ ಜೊತೆಯಾಗುವ ನನಸಿನ ಸರಮಾಲೆ ಇತ್ತು…! |
| ಧಾರವಾಡ ಬಿಟ್ಟ ಬಂದ ನಂತರವೂ ಬಿಡದೆ ಕಾಡುವ ಮೋಹವಿತ್ತು |
| ಧಾರವಾಡ ಹಳೆ ಗೆಳತಿಯಂಗ ಕಾಡಾತ್ತೀತು |
| ಆಕಿ ನಗು, ಹುಡುಗಾಟ, ಹುಡುಕಾಟವಿತ್ತು ತಿರುಗಾಟ ಅವಳ ಜೊತಿಗೀನ |
| ನಾಟಕ ಮಜಲುನ ಮಜವಿತ್ತು ಬದುಕಿಗೆ ಬೇಕಾದ ವಿಚಾರ |
| ಸಂಕೀರ್ಣವಿತ್ತು ಜೊತೆಗೆ ಅವಳು ಸಂಕೀರಣವಾಗಿದ್ದಳು |
| ದಾರಿಗೆ ಚೆಲ್ಲಿದ ಹೂನಗೆ |
| ಚೈತ್ರದ ಚಿರುಗು ಇತ್ತು |
| ಶಿಶಿರಕ್ಕೆ ಎಲೆ ಉದುರಿಸೋ ಮುನಿಸಿತ್ತು |
| ಮೌನವಿತ್ತು ಜೊತೆಗೆ ಚಿಲಿಪಿಲಿ ಕಲರವವಿತ್ತು…! |
| ಖಾಲಿ ತಲೆಯಲ್ಲಿ ಸಿದ್ದಾಂತದ ನೆಲೆಯೂರಿತ್ತು ಎಡ ಬಲ |
| ವಿಚಾರದ ಹುಚ್ಚಾಟದಾಗ |
| ಕ್ರಾಂತಿಯ ಕಿಡಿಯ ಬೆಳಕಿತ್ತು |
| ಜೊತೆಗೆ ಸಾಂಸ್ಕ್ರತಿಯ ಸವಿತ್ತು |
| ಬದುಕಿಗೆ ಎನಬೇಕಾಗಿತ್ತು ಅದು ಇತ್ತು ಇದು ಇತ್ತು ನಾವು ಪಡಕೂಂಡುವಿ |
| ಧಾರವಾಡನ ನಾವು ಕಳಕೊಂಡವಿ ಬಿಟ್ಟವಿ |
| ಜೀವನ ಬೆನ್ನಹತ್ತಿ ಸಂಸಾರದಾ ಬಿದ್ದಿವಿ…! |
| ನಾನು ಮುದುಕನಾದೆ |
| ಧಾರವಾಡಕ್ಕೆ ಮಾತ್ರ ಇನ್ನು ಹರೆಯ ನಿತ್ಯ ಬರುವ ಜೀವಗಳಿಗೆ |
| ತನ್ನ ಮಡಿಲೂಳಗೆ |
| ಬರಮಾಡಿಕೊಂಡು |
| ತನ್ನಲ್ಲಿ ಇರುವದನ್ನು ಹಂಚಿಬಿಡುವ ನಿಸ್ವಾರ್ಥ |
| ಗುಣವಿದೆ ಈ ಮಣ್ಣಿಗೆ |
| ಇನ್ನು ಹರೆಯ ಬೆಳಯುತಲಿದೆ |
| ವಸಂತಕ್ಕೆ ಮೈನೇರದ ವಧುವಿನಂತೆ…! |
| ( ಧಾರವಾಡ ಶಹರವನ್ನು ಇಷ್ಟು ಪದಗಳಲ್ಲಿ ಬಂಧಿಸಿಡಲು ಅಸಾಧ್ಯವೆ ಇದು ಆದಾವ ಮೂಲೆಗೂ ಸಾಲದು..) |
| -ವೃಶ್ಚಿಕ ಮುನಿ |